ಅಂಚನ್ ಗಾರ್ಮೆಂಟ್ಸ್ ಸಂಸ್ಥೆಯ ಆರಂಭ

1999 ರಲ್ಲಿ ಬಂಟ್ವಾಳ ದ ಮಾರ್ಕೆಟ್ ರಸ್ತೆ ಯಲ್ಲಿ ಅಂಚನ್ ಗಾರ್ಮೆಂಟ್ಸ್ ಸಂಸ್ಥೆಯು ಪ್ರಾರಂಭವಾಯಿತು ಹಂತ ಹಂತವಾಗಿ ದೈವದೇವರ ದಯೆಯಿಂದ ಗುರುಹಿರಿಯರ ಆಶೀರ್ವಾದದೊಂದಿಗೆ ನಮ್ಮ ಪ್ರೀತಿಯ ಗ್ರಾಹಕ ಬಂಧುಗಳಾದ ನಿಮ್ಮ ಶುಭ ಹಾರೈಕೆಯಿಂದ ಸಂಸ್ಥೆಯನ್ನು ಹಾಗೂ ವ್ಯವಹಾರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡುಹೋಗಲಾಯಿತು. ಬಂಟ್ವಾಳ ತಾಲೂಕಿನಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಮದುವೆಯ ಸೀರೆಗಳ ಬೃಹತ್ ಮಳಿಗೆ ಎಂದು ಹೆಸರುವಾಸಿ ಆಯಿತು.

ಸ್ವಂತ ಕಟ್ಟಡ ಮತ್ತು ವಿಸ್ತರಣೆ

2007 ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಜಿಲ್ಲೆಯ ಎಲ್ಲಾ ಗ್ರಾಹಕರ ಅಚ್ಚು ಮೆಚ್ಚಿನ ಸಂಸ್ಥೆ ಎನಿಸಿಕೊಂಡಿತು. ಕಂಪನಿಯಿಂದ ನೇರವಾಗಿ ಗ್ರಾಹಕರಿಗೆ ಕೊಡುವಲ್ಲಿ ಸಫಲತೆಯನ್ನು ಕಂಡಿತು. ದೈವ ದೇವರ ದಯೆಯಿಂದ ಗುರು ಹಿರಿಯರ ಆಶೀರ್ವಾದದಿಂದ ನಮ್ಮ ಸಂಸ್ಥೆಯ ಪ್ರೀತಿಯ ಗ್ರಾಹಕ ಬಂಧುಗಳಾದ ನಿಮ್ಮೆಲರ ಪ್ರೀತಿಯ ಶುಭ ಆರೈಕೆಯಿಂದ 2024 ರಲ್ಲಿ ಬೈಪಾಸ್ ನಲ್ಲಿ 'ಅಂಚನ್ ಸಿಲ್ಕ್ಸ್' ಎಂಬ ವಿಶಾಲವಾದ ದೊಡ್ಡ ಮಳಿಗೆಯನ್ನು ಪ್ರಾರಂಭಿಸಲಾಯಿತು.

ಅಂಚನ್ ಸಿಲ್ಕ್ಸ್ — ಒಂದೇ ಸೂರಿನಡಿಯಲ್ಲಿ ಎಲ್ಲವೂ

ದೂರ ದೂರ ಊರಿನಿಂದ ಬರುವಂತಹ ಗ್ರಾಹಕರಿಗೆ ಅನುಕೂಲವಾಗಲು ಎಲ್ಲಾ ರೀತಿಯ ಹೆಸರಾಂತ ಮದುವೆ ಸೀರೆಗಳು ಹಾಗೂ ಎಲ್ಲಾ ರೀತಿಯ ರೆಡಿಮೇಡ್ ಬಟ್ಟೆಗಳು ಹಾಗೂ ವಿವಿಧ ಶೈಲಿಯ ಫ್ಯಾನ್ಸಿ ಐಟಮ್ 1 ಗ್ರಾಂ ಗೋಲ್ಡ್ & ಫೂಟ್ ವೇರ್ ಕಲೆಕ್ಷನ್ ಗಳು ಒಂದೇ ಸೂರಿನಡಿಯಲ್ಲಿ ಸಿಗುವಂತ ವ್ಯವಸ್ಥೆಯನ್ನು ಮಾಡಲಾಗಿದೆ. ನಮ್ಮ ಎಲ್ಲಾ ಊರಿನ ಗ್ರಾಹಕ ಬಂಧುಗಳಾದ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ಬರುವಂತಹ ಎಲ್ಲಾ ಗ್ರಾಹಕರಿಗೆ ಅಂಚನ್ ಸಿಲ್ಕ್ಸ್ ಅಚ್ಚುಮೆಚ್ಚಿನ ಸಂಸ್ಥೆಯೆಂದು ಹೆಸರುವಾಸಿಯಾಯಿತು.

ಸಾಮಾಜಿಕ ಸೇವೆ ಮತ್ತು ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್

ನಮ್ಮ ಸಂಸ್ಥೆಗೆ ಬಂದ ಆರ್ಥಿಕ ಲಾಭಾಂಶದಲ್ಲಿ 1999 ರಿಂದ ಇಲ್ಲಿಯ ತನಕ ಅದೆಷ್ಟು ಧಾರ್ಮಿಕ ಸಾಮಾಜಿಕ ಸರಕಾರಿ ಶಾಲೆಗಳ ಉಳಿವಿಗೋಸ್ಕರ ನಿರಂತರವಾಗಿ ಸೇವೆಯನ್ನು ನೀಡಿದ್ದೇವೆ. ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಕಟ್ಟಿ ಟ್ರಸ್ಟಿನ ಮುಂದಾಳತ್ವವನ್ನು ವಹಿಸಿಕೊಂಡು ಎಲ್ಲಾ ಸದಸ್ಯರ ಸಹಕಾರದಿಂದ 28 ಮಕ್ಕಳಿದ್ದ ಶಾಲೆಯಲ್ಲಿ ಇಂದು 1,005 ಮಕ್ಕಳು ಸಂಸ್ಕಾರಯುತವಾದ ಮಾತೃ ಭಾಷೆಯೊಂದಿಗೆ ಇಂಗ್ಲೀಷ್ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ದೇಶದಲ್ಲಿ ಸಮಾನ ಶಿಕ್ಷಣ ಜಾರಿಯಾಗಬೇಕು, ಸರ್ಕಾರಿ ಶಾಲೆಗಳು ಉಳಿಯಬೇಕು, ಬಡ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುಕ ಮಾತೃಭಾಷೆಯೊಂದಿಗೆ ಇಂಗ್ಲೀಷ್ ಶಿಕ್ಷಣ ಕಡ್ಡಾಯವಾಗಿ ಸಿಗುವಂತೆ ಆಗಬೇಕು ಎಂಬುದೇ ನಮ್ಮ ಆಶಯ ಹಾಗೂ ಪ್ರಯತ್ನ. ಇನ್ನಷ್ಟು ಸಾಮಾಜಮುಖಿ ಸೇವೆಯನ್ನು ಮಾಡಲು ನಮ್ಮ ಪ್ರೀತಿಯ ಗ್ರಾಹಕ ಬಂಧುಗಳಾದ ನಿಮ್ಮೆಲರ ಪ್ರೀತಿ ಸಹಕಾರ ಶುಭ ಹಾರೈಕೆಗಳು ನಮ್ಮ ಮತ್ತು ನಮ್ಮ ಸಂಸ್ಥೆಯ ಮೇಲೆ ಇರಲಿ. ಸದಾ ನಿಮ್ಮ ಸೇವೆಯಲ್ಲಿ.... "ಅಂಚನ್ ಸಿಲ್ಕ್ಸ್ ಬೈಪಾಸ್ ಬಂಟ್ವಾಳ" 🙏

Our Premium Collections

🧵

Bridal Sarees

Luxurious Kanjivaram, Silk & Designer drapes

👚

Fashion Wear

Trendy outfits for every occasion

💎

Accessories

Elegant add-ons to elevate your style

🪔

Gold Collections

1 Gram jewellery with timeless designs

💄

Cosmetics

Premium beauty essentials for a flawless glow

🛍️

Complete Store

Your all-in-one fashion destination

Saree Collection

Exclusive Saree Collection

Explore our exquisite saree collection crafted to celebrate tradition and elegance. From rich silk weaves to lightweight everyday cottons, each saree is designed with intricate detailing, vibrant colors, and timeless patterns. Perfect for weddings, festivals, and special occasions, our collection blends heritage craftsmanship with modern style to make every moment graceful.

  • ✔ Soft & Premium Fabric
  • ✔ Traditional Zari Work
  • ✔ Perfect for Weddings & Festivals
  • ✔ Elegant & Comfortable Wear